ಇಲ್ಲೊಂದು ಬ್ಲಾ-ಗಿಲು ತೆರೆದುಕೊಂಡಿದೆ
July 1, 2008
ಇವತ್ತಿನಿಂದ ನನ್ನದೊಂದು ಬ್ಲಾಗ್ ಬಾಗಿಲು ಬ್ಲಾಗಿನಂಗಳಕ್ಕೆ ತೆರೆದುಕೊಳ್ಳುತ್ತಿದೆ.
ನನ್ನದೇ ಒಂದು ಬ್ಲಾಗ್ ತೆರೆಯಬೇಕೆಂಬ ಬಯಕೆ ಬಹು ದಿನಗಳಿಂದ ಇತ್ತಾದರೂ,ಅಂತಹ ಬಯಕೆಗಳಿಗೆಲ್ಲ ಒಂದಿಷ್ಟು ದಿನ ಬೀಗ ಜಡಿದು, ಹಾಗೇ ಸುಮ್ಮನೆ ಮಜಾ ನೋಡುತ್ತಿದ್ದೆ. ಈಗ ಇದಕ್ಕೆಲ್ಲ ‘ಮುಹೂರ್ತ’ ಕೂಡಿ ಬಂದಂತಿದೆ.
ಅಸಲಿಗೆ ಈ ಬ್ಲಾಗ್ ಲೋಕದ ಪರಿಚಯವಾದದ್ದೇ ವರ್ಷದ ಹಿಂದೆ.ಟೈಮ್ಸ್ ಬಿಟ್ಟು ಕೆಂಡಸಂಪಿಗೆ ಸೇರಿದ ಬಳಿಕ ಈ ಜಗತ್ತು ಇನ್ನಷ್ಟು ಆತ್ಮೀಯವಾಗುತ್ತಾ ಬಂದಿದೆ. ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದೇನೆ.ಇಲ್ಲೇ ಒಂದಿಷ್ಟು ವಿಸ್ಮಯಗಳನ್ನು, ವಿಚಾರಗಳನ್ನು, ವಾದ-ವಿವಾದಗಳನ್ನೆಲ್ಲ ಕಾಣುತ್ತಾ ಬಂದಿದ್ದೇನೆ.ಈಗಷ್ಟೆ ಮುಗಿಲ ಕಂಪಿಗೆ ಮುನ್ನುಡಿ ಬರೆಯುತ್ತಿದ್ದೇನೆ.
ಮುಂಗಾರಿನ ಮೊದಲ ಮಳೆಗೆ ನೆಲವೆಲ್ಲ ಒದ್ದೆಯಾಗಿ, ಇದ್ದಬದ್ದ ಧೂಳೆಲ್ಲ ಆಗಸಕ್ಕೇರುವಾಗ ಘಮ್ಮಂಥ ಒಂದು ವಾಸನೆ ಬರುತ್ತದೆಯಲ್ಲಾ.ಅಂತಹದ್ದೇ ಮಣ್ಣಿನ ವಾಸನೆ ಮುಗಿಲ ಕಂಪಾಗಿ ಮೂಡಿಬರಲಿದೆ. ವಾರಕ್ಕೊಮ್ಮೆಯಾದರೂ ಬರೆಯಬೇಕೆಂಬ ದೂರದಾಸೆ-ದುರಾಸೆ ಎರಡೂ ನನ್ನದು.
Entry Filed under: Uncategorized. .
8 Comments Add your own
Leave a Comment
Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>
Trackback this post | Subscribe to the comments via RSS Feed
1.
ಅರವಿಂದ ನಾವಡ | July 1, 2008 at 11:45 am
ಸ್ವಾಮಿ,
ಒಳ್ಳೆಯದಾಗಲಿ, ಬ್ಲಾ-ಗಿಲು ತೆರೆದಿದ್ದಕ್ಕೆ. ವ್ಯಾಪಾರ ಚೆನ್ನಾಗಿ ನಡೆಯಲಿ. ಆದರೆ ದುರಾಸೆ ಬೇಡ, ದೂರದಾಸೆ ಇರಲಿ. ಒಳ್ಳೆಯದಾಗಲಿ.
ನಾವಡ
2.
jomon | July 1, 2008 at 12:41 pm
ಜಿತೇಂದ್ರ,
ಬ್ಲಾಗಿನಂಗಳಕ್ಕೆ ಸ್ವಾಗತ. ನಿಮ್ಮ ಬ್ಲಾಗಿನ ಹೆಸರು ಹಾಗೂ ಬರಹದ ಕಂಪು ಎರಡೂ ನವಿರಾಗಿದೆ. ಇಷ್ಟು ದಿವಸ ನಮ್ಮೆಲ್ಲರ ಬ್ಲಾಗಿಗೆ ಭೇಟಿ ನೀಡಿ ಕಮೆಂಟುಗಳನ್ನು ಕುಟ್ಟುತ್ತಾ , ಹೊಸ ಬರಹಗಳನ್ನು ಪ್ರಕಟಿಸದೆ ಇರುವ ನಮ್ಮ ಪಜೀತಿಗಳನ್ನು ಗಮನಿಸುತ್ತಾ, ಕೊನೆಗೆ ನೀವೇ ಪ್ರಾರಂಭಿಸಿರುವ ಈ ಪ್ರಯತ್ನ ನಿಮ್ಮಂತೆಯೇ ನಮಗೂ ಒಂದಿಷ್ಟು ಖುಷಿ ತಂದಿದೆ. ನೀವು ಹೇಳಿದಂತೆಯೆ ವಾರಕ್ಕೊಮ್ಮೆ ನಿಮ್ಮ ಬರಹಗಳನ್ನು ಓದಲು ಬ್ಲಾಗಿಲಿಗೆ ಖಂಡಿತ ಬರುತ್ತೇವೆ. ನೀವು ಕೊಟ್ಟ ಮಾತು ತಪ್ಪುವುದಿಲ್ಲ ಎಂಬ ನಂಬಿಕೆಯೂ ಇದೆ. ಮುಗಿಲ ಕಂಪು ಮನಕ್ಕೆ ತಂಪು ನೀಡುವ ಒಂದಿಷ್ಟು ಬರಹಗಳನ್ನು ಹೊತ್ತು ತರಲಿ.
ಧನ್ಯವಾದಗಳು.
ಜೋಮನ್.
3.
Tina | July 2, 2008 at 5:46 am
ಜಿತೇಂದ್ರ,
ವೆಲ್ಕಂ. ಸುಸ್ವಾಗತ. ರಾಶಿ ಬರೆಯಿರಿ.
ಟೀನಾ
4.
pbanagi | July 2, 2008 at 1:29 pm
hi… jitendra….. blogmaneyalli kampebbisalu horatiddeeya. mattu mattondu jolige netu kondiddeeya. adu tumbali…….-praveen
5.
ಜಿತೇಂದ್ರ ಸಿ.ರಾ.ಹುಂಡಿ | July 3, 2008 at 8:33 am
ನಾವಡರೇ, ಬ್ಲಾಗಿಗೆ ಬೇಟಿ ಕೊಟ್ಟಿದ್ದಕ್ಕೆ ಧನ್ಯವಾದ. ವ್ಪಾಪಾರ ನಡೆಸಲೆಂದೇ ಬಾಗಿಲು ತೆರೆದಿದ್ದೇನೆ. ಮುಂದಿನದ್ದನ್ನು ಕಾದು ನೋಡಬೇಕಷ್ಟೆ.
@ಜೋಮನ್ , ನಿಮಗೆ ಖುಷಿಯಾದದ್ದನ್ನು ಕಂಡು ನನಗೂ ಖುಷಿಯಾಗುತ್ತಿದೆ. ನಿಮ್ಮ ನಂಬಿಕೆಯನ್ನ ಉಳಿಸಿಕೊಳ್ಳಲಾದರೂ ಒಂದಿಷ್ಟು ಬರೆಯುತ್ತಿರುತ್ತೇನೆ.
@ಟೀನಾ, ನಿಮಗೂ ಮುಗಿಲ ಕಂಪಿಗೆ ಸ್ಗಾಗತ. ಇಗಷ್ಟೆ ಕಾಳು ಚೆಲ್ಲಿದ್ದೇನೆ. ರಾಶಿಯಾಗುವುದು ದೂರದ ಮಾತೇ ಸರಿ. ಹೀಗೆ ಬ್ಲಾಗಿಗೆ ಬರುತ್ತಿರಿ.
ಪ್ರವೀಣ, ನೀನು ಇಲ್ಲಿಗೆ ಬಂದದ್ದನ್ನು ಖುಷಿಯಾಯಿತು.
ಹೀಗೆಯೇ ಬಂದು ಹೋಗುತ್ತಿರಿ.
-ಜಿತೇಂದ್ರ
6.
viveka | July 4, 2008 at 4:27 pm
Tumba chennagide. inthahaddondu nimma pratibhege sariyagide. huttuhabbada shubhashayagalu. munchitavagi!!!
7.
sreenidhi odilanala | July 6, 2008 at 5:42 am
jithu, namaskara. blog nodde. thumba chennagide. baritha iru. dooradase adastu bega hattira vagali. mattastu barahakkagi kayuttiruve. all the best…
-sreenidhi odilnala
8.
madhu | July 31, 2008 at 7:03 am
Remarkable work from a dear one. congrats with good luck for the near fortune.