ನಾನೀಗ ಮೊದಲಿನಂತಿಲ್ಲ

October 30, 2008

ನೀ ಸಿಗಲಿಲ್ಲ ಅಂತ
ಖಂಡಿತ ಬೇಜಾರಿಲ್ಲ

ಈಗ ನಾನು ಮೊದಲಿನಂತಿಲ್ಲ
ನಿನ್ನನ್ನೇ ನೆನೆಸಿ ಕೊರಗುತ್ತಿಲ್ಲ
ನೀ ಕಾಡಿದಾಗಲೆಲ್ಲ
ಮನಸ್ಸು ನಿನ್ನ ಸಂಗ ಬೇಡಿದಾಗಲೆಲ್ಲ
ಸುಮ್ಮನೆ ಮೌನಕ್ಕೆ ಶರಣಾಗುತ್ತೇನೆ

ಇಲ್ಲಸಲ್ಲದ ಉಪಮೆಗಳ ಕೆತ್ತಿ
ನಿನ್ನ ಮೇಲೆ ಪದ್ಯ ಕಟ್ಟುವುದ ಬಿಟ್ಟಿದ್ದೇನೆ
ಹಾಗೆ ಬರೆದ ಕವಿತೆಗಳ
ಗಂಟುಕಟ್ಟಿ ಅಟ್ಟಕ್ಕೆಸೆದು
ನಿಟ್ಟುಸಿರು ಬಿಟ್ಟಿದ್ದೇನೆ

ನೆನಪುಗಳು ಒತ್ತೊತ್ತಿ ಬಂದಾಗ
ದುಃಖಗಳ ಭಾರ ಅತಿಯಾಯಿತು ಅನಿಸಿದಾಗ
ಎಂದಾದರೊಮ್ಮೆ ಅತ್ತು ಹಗುರಾಗುತ್ತೇನೆ

ಅಷ್ಟಕ್ಕೂ ಸಮಾಧಾನವಾಗದಿದ್ದರೆ
ಹೊದ್ದು ಮಲಗುತ್ತೇನೆ
ಕನಸಿನಲ್ಲಾದರೇ ನೀನು ಖಂಡಿತ ಸಿಗುತ್ತಿ
ನನ್ನೊಂದಿಗೇ ಮಾತನಾಡುತ್ತಿ, ಲಲ್ಲೆ ಗರಿಯುತ್ತಿ,
ಅಷ್ಟರಲ್ಲೇ ನಿದ್ದೆಯ ಮಂಪರು ಕಣ್ಣಿಗತ್ತಿ
ನಾನು ಕೊಸರತೊಡಗಿದಾಗ
ಹಣೆ, ಕಣ್ಣು, ಕೆನ್ನೆಗೆಲ್ಲ ಹೂಮುತ್ತನಿಡುತ್ತ
ನೀ ನನ್ನೊಳಗೆ ಕರಗಿಹೋಗುತ್ತಿ

ಮನಸ್ಸೀಗ ಅದೆಷ್ಟೋ ನಿರಾಳ

Entry Filed under: ಕಥೆ-ಕವಿತೆ. Tags: , , .

5 Comments Add your own

  • 1. sundaranadu  |  October 30, 2008 at 3:49 pm

    nanna manassina bhavanegalella illi akshara roopa padedive. thank u.

    Rajanna
    abhimani
    sundaranadu

    Reply
  • 2. ವೈಶಾಲಿ  |  November 3, 2008 at 10:50 am

    nice… ಕವಿತೆ ಕೂಡ ಯಾವ ಉಪಮೆಗಳಿಲ್ಲದೆ ಹೇಳಬೇಕಾದ್ದನ್ನು ತುಂಬ ಸರಳವಾಗಿ, ಚಂದವಾಗಿ ಹೇಳಿ ನಿರಾಳವಾದಂತಿದೆ.

    Reply
  • 3. kallare  |  November 5, 2008 at 11:34 am

    ನಾನೂ ಹಗುರಾದೆ ಗುರುಗಳೇ… ಬ್ಲಾಗುಗಳ ಲೋಕದಲ್ಲಿ ಇಷ್ಟವಾದುದರಲ್ಲಿ ಇದೂ ಒಂದು.

    Thank u :)

    Reply
  • 4. ಜಿತೇಂದ್ರ ಸಿ.ರಾ.ಹುಂಡಿ  |  November 24, 2008 at 6:50 am

    ರಾಜಣ್ಣ, ವೈಶಾಲಿ, ಮಹೇಶ್…

    ಎಲ್ರಿಗೂ ಥ್ಯಾಂಕ್ಸ್. ಪ್ರತಿಕ್ರಿಯಿಸಿದ್ದಕ್ಕೆ… ಹೀಗೆ ಬರುತ್ತಿರಿ…

    Reply
  • 5. Chaithra  |  December 21, 2008 at 8:10 am

    enri yari aa cheluve e tara disopointment kottavlu adru masth agide. ella huduguru heege adre kandita acid daali ella adress ge illadangagathe. chennagide ri. all the best hosa hudgi mele bariri.

    Reply

Leave a Comment

Required

Required, hidden

Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>

Trackback this post  |  Subscribe to the comments via RSS Feed


ಕಾಲಮಾನ

October 2008
M T W T F S S
« Sep   Nov »
 12345
6789101112
13141516171819
20212223242526
2728293031  

Archives

1356

ಬ್ಲಾಗ್ ಕೊಂಡಿ

ಇವರು ಹೀಗೆಂದರು..

jomon on ಬಹು ದಿನಗಳ ನಂತರ: ಒಂದು ಅನುವ…
ಶೆಟ್ಟರು (Shettaru) on ಬಹು ದಿನಗಳ ನಂತರ: ಒಂದು ಅನುವ…
jomon on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
minchulli on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
ಪ್ರದೀಪ್ on ಹೀಗೆ ಸುಮ್ಮನೆ ಒಂದು ಹನಿ

ಈಚೆಗೆ ಬರೆದಿದ್ದು

ಮುಗಿಲು ಮುಟ್ಟಿದವರು

ನೀವು ಮೆಚ್ಚಿದ್ದು- ಹೆಚ್ಚಿಗೆ ನೋಡಿದ್ದು

ಪಕ್ಷಿ ನೋಟ

Feeds