ನಮ್ಮ ಆಯಸ್ಸು ಇನ್ನೆಂಟೇ ವರ್ಷ!
November 5, 2008
ಈ ಸಲ ಅಮ್ಮನಿಗೊಂದು ಮೊಬೈಲ್ ಕೊಡಿಸಬೇಕು ಅಂತ ನಿರ್ಧಾರವಾಯಿತು. ಬರೀ ಮೊಬೈಲ್ ಕೊಡಿಸೋದಕ್ಕೆ ಆಗ್ತದಾ? ಅದಕ್ಕೆ ಅದರ ಜೊತೆಗೇ ಸಿಮ್ ಕೂಡ ತಗೋಬೇಕು ಅಂತ ತೀರ್ಮಾನ ಮಾಡ್ಕೊಂಡು ಸಿಮ್ ಅಂಗಡಿ ಹುಡುಕಿ ಹೊರಟೆ.
ಇಲ್ಲೇ ಸಿಟಿಯಲ್ಲೇ ಟವರುಗಳ ಕೆಳಗೇ ಕೂತು ಮಾತನಾಡಿದರೂ ನಿಮಿಷಕ್ಕೊಮ್ಮೆ ಕಟ್ ಆಗುವ , ಅರ್ಧಂಬರ್ಧ ಧ್ವನಿ ಕೇಳಿಸಿ ಕುಯ್…ಗುಟ್ಟುವ ಸ್ಪೈಸ್ ನೆಟ್ ವರ್ಕ್ ನಮ್ಮೂರಿನಲ್ಲಿ ಮಾತ್ರ ಸಖತ್ತಾಗಿ ಸಿಗುತ್ತೆ. ಉಳಿದೆಲ್ಲ ಕಂಪನಿಗಳಿಗಿಂತಾ ಫುಲ್ ಕವರೇಜ್. ಅದಕ್ಕೆ ಅದೇ ತೆಗೆದುಕೊಳ್ಳೋದು ಅಂತ ನಿರ್ಧಾರ ಮಾಡಿದ್ದು.
ಸರಿ ಸ್ಪೈಸ್ ಕೇರ್ ಆಫೀಸಿಗೆ ಹೋದದ್ದಾಯಿತು. ಅದೃಷ್ಟಕ್ಕೆ ಚಂದನೆ ಹುಡುಗಿ ಸಿಕ್ಕಳು. ತುಸು ಹೆಚ್ಚೇ ಸ್ಮೈಲ್ ಮಾಡಿ ಸ್ವಾಗತಿಸಿದಳು. ಏನು ಎತ್ತ ಅಂತ ವಿಚಾರಿಸಿ, ಇದ್ದಬದ್ದ ಆಫರ್ ಗಳ ಕಥೆಯನ್ನೆಲ್ಲ ತೆರೆದಿಟ್ಟಳು. ಅಮ್ಮ ಔಟ್ ಗೋಯಿಂಗ್ ಕರೆಗಳನ್ನ ಮಾಡುವುದಿಲ್ಲವಾದ್ದರಿಂದ ಲೈಫ್ ಟೈಮ್ ವ್ಯಾಲಿಡಿಟಿ ಉತ್ತಮ ಅಂತಂದುಕೊಂಡು ಅದನ್ನೇ ಆಯ್ಕೆ ಮಾಡಿ ದುಡ್ಡು ತೆತ್ತದ್ದೂ ಆಯಿತು.
ಹುಡುಗಿ ಬಿಲ್ ಸಿದ್ಧಪಡಿಸಿದವಳೇ, ಸಿಮ್ ಜೊತೆಗಿತ್ತಳು. ‘ಸರ್ ನೀವು ಆಕ್ಟಿವೆಟ್ ಮಾಡಿರುವುದು ಲೈಫ್ ಟೈಮ್ ಪ್ಲಾನ್. ೨೦೧೬ರ ತನಕ ವ್ಯಾಲಿಡಿಟಿ ಇರುತ್ತೆ!’. ‘ಅರೆ! ಲೈಫ್ ಟೈಮ್ ಅಂದರೆ ಲೈಫ್ ಇರುವ ತನಕ ಅಲ್ವಾ?’ , ‘ಹಾಗಲ್ಲ ಸರ್ ಈಗ ಎಲ್ಲ ಕಂಪನಿಗಳು ಇದೇ ಆಫರ್ ನೀಡ್ತಾ ಇರೋದು. ೨೦೧೬ರ ನಂತರ ನಿಮ್ಮ ಸಿಮ್ ಅನ್ನ ಮತ್ತೆ ಆಕ್ಟಿವೇಟ್ ಮಾಡಿಸಬೇಕು’.
ಮರು ಮಾತಿಗೆ ಅವಕಾಶನೇ ಇರ್ಲಿಲ್ಲ. ಟೇಬಲ್ ಮೇಲಿದ್ದ ಸಿಮ್ ಹ್ಹಿಹ್ಹಿಹ್ಹಿ… ಅಂತ ಅಣಕಿಸಿ ನಗುತ್ತಿರುವ ಹಾಗೆ ಅನಿಮೇಶನ್ ಎಫೆಕ್ಟ್ ಕಣ್ಮುಂದೆ ಬಂದು, ಅದರ ತಲೆ ಮೇಲೆ ಮೊಟಕಿ, ಎತ್ತಿ ಜೇಬಿಗಿಳಿಸಿಕೊಂಡು ಬಂದೆ. ಕುತೂಹಲಕ್ಕೆ ಅಂತ ಬೇರೆ ಕಂಪನಿಗಳ ಲೈಫ್ ಟೈಮ್ ಬಗ್ಗೆ ವಿಚಾರಿಸಿದರೆ, ಅವುಗಳ ಕಥೆಯೂ ಇಷ್ಟೆ!
ಒಟ್ಟಿನಲ್ಲಿ ಈ ಮೊಬೈಲ್ ಕಂಪನಿಗಳ ಪ್ರಕಾರ ನಮ್ಮ ಆಯಸ್ಸು ಎಂಟೇ ವರ್ಷ ಅಷ್ಟೆ. ಆಮೇಲೆ ನಾವು ಬದುಕಿದ್ದೀವಿ ಅಂತ ಅವರಿಗೆ ಖಾತ್ರಿ ಮಾಡಿಸಿ ಜೀವಿತಾವಧಿಯನ್ನ ನವೀಕರಿಸಿಕೊಳ್ಳಬೇಕು. ಅದಕ್ಕೆ ಅವರು ಲೈಫ್ ಟೈಮ್ ವ್ಯಾಲಿಡಿಟಿ ಅಂತ ನಮ್ಮ ಆಯಸ್ಸು ನಿರ್ಧರಿಸಿ ಎಂಟು ವರ್ಷ ನೀಡೋದು!
Entry Filed under: ಕಂಡಿದ್ದು-ಕೇಳಿದ್ದು. Tags: ಮೊಬೈಲ್. ಸಿಮ್, ಲೈಫ್ ಟೈಮ್.
6 Comments Add your own
Leave a Comment
Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>
Trackback this post | Subscribe to the comments via RSS Feed
1.
srinidhi odilnala | November 10, 2008 at 2:35 pm
olle bhara sir… olle vinodavgi bardiddira. hige sagali baravanige, navu nodtha irthivi…vandanegalu.
2.
jomon | November 19, 2008 at 9:37 am
ಒಂದು ಮೊಬೈಲ್ ಸಿಮ್ ಕಾರ್ಡಿಗೆ ಇರುವಷ್ಟೂ ವ್ಯಾಲಿಡಿಟಿ ನಮ್ಮ ಬದುಕಿಗೆ ಇಲ್ಲ ಎನ್ನುವ ಕಾಲ ಬಂತು ಕಣ್ರಿ… ಒಳ್ಳೆಯ ಬರಹ.
3.
Chitra karkera | November 21, 2008 at 4:53 am
ಬರಹ ಚೆನ್ನಾಗಿದೆ ಸರ್,,,,,ಹಹಹಹ ಸಿಮ್, ಲೈಫು..ವ್ಯಾಲಿಡಿಟಿ…ಸಕತ್ತಾಗಿ ಬರದಿದ್ದೀರಿ.
ಕನ್ನಡಪ್ರಭ ವೆಬ್ ನಲ್ಲಿ ನಿಮ್ ಬ್ಲಾಗ್ ಪ್ರಕಟವಾಗಿತ್ತು…ಅಲ್ಲಿಂದ ಇಲ್ಲಿ ಬಂದೆ…
ಚಿತ್ರಾ(ಶರಧಿ)
4.
ಜಿತೇಂದ್ರ ಸಿ.ರಾ.ಹುಂಡಿ | November 24, 2008 at 6:47 am
ಶ್ರೀನಿಧಿ, ನೀವೂ ನೋಡ್ತಾನೆ ಇರೀ ಸಾಆಆಆಆಆಆರ್…………….
ಜೋಮನ್,
ಕಾಲಾಯ ತಸ್ಮೈ ನಮಃ !
ಚಿತ್ರಾ,
ಓದಿ ಒಂದೆರಡು ಮಾತು ಬರೆದಿದ್ದದ್ದಕ್ಕೆ ಥ್ಯಾಂಕ್ಸ್.. ನಿಮಗೆ ಮತ್ತು ಕನ್ನಡಪ್ರಭಕ್ಕೆ ಎಲ್ಲರಿಗೂ…..
ಹೀಗೆ ಓದುತ್ತಿರಿ……
5.
M G Harish | December 11, 2008 at 6:36 pm
TRAI ವಿಧಿಸಿರುವ ಷರತ್ತುಗಳಿಂದಾಗಿ ಹಾಗಾಗಿದೆ… ಎಲ್ಲ ಮೊಬೈಲ್ ಕಂಪನಿಗಳೂ ೨೦೧೬ರಲ್ಲಿ ನವೀಕರಣಕ್ಕೊಳಪಡಬೇಕು..
6.
ಸುಪ್ತದೀಪ್ತಿ | January 9, 2009 at 12:30 am
ಇದೊಂಥರಾ ವಾಸಿ ಮಾರಾಯ್ರೆ! ಇತ್ತೀಚೆಗೆ ನಾನು ಊರಲ್ಲಿದ್ದಾಗ ಕೇಳಿದ ವಿಷಯ ಇನ್ನೂ ಆಶ್ಚರ್ಯಕರವಾಗಿದೆ. ಪಿಂಚಣಿ ಬರೋರೆಲ್ಲ ಪ್ರತೀ ವರ್ಷ ತಾವು ಬದುಕಿಯೇ ಇದ್ದೇವೆ ಅಂತ ಪ್ರೂಫ್ ತೋರಿಸಬೇಕು, ಯಾರ್ಯಾರದೋ ಸರ್ಟಿಫಿಕೇಟ್, ಅಫಿದಾವಿತ್ ಮೂಲಕ. ಇಲ್ಲದಿದ್ದರೆ ಪಿಂಚಣಿ ಬಂದ್! “ವರ್ಷವರ್ಷವೂ ಇದೇ ದೊಡ್ಡ ಗೋಳಾಗಿದೆ” ಅಂದಿದ್ದರು ಒಬ್ರು ವಯಸ್ಸಾದ ಅಜ್ಜಿ. ಮೊಬೈಲಿಗೆ ಎಂಟು ವರ್ಷಕ್ಕಾದ್ರೂ ಗ್ಯಾರಂಟಿ ಇದ್ಯಲ್ಲ!