ಈ ಹೊತ್ತಿಗೆ ಈ ಕವಿತೆಯ ನೆನಪು
February 13, 2009

ಒಲವೆಂಬ ಹೊತ್ತಿಗೆಯ ನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ, ಹುಚ್ಚ!
ಹಗಲಿರುಳು ದುಡಿದರೂ, ಹಲವು ಜನುಮ ಕಳೆದರೂ
ನೀ ತೆತ್ತಲಾರೆ ಬರಿಯ ಅಂಚೆವೆಚ್ಚ!
ಬಹುಶಃ ಬೇಂದ್ರೆಯದ್ದಿದ್ದಿರಬೇಕು. ಹತ್ತನೇ ತರಗತಿಯಲ್ಲಿದ್ದಾಗ ಡೈರಿಯ ಮೊದಲ ಪುಟದಲ್ಲಿ ಬರೆದುಕೊಂಡಿದ್ದೆ. ನಿಜಕ್ಕೂ ಅದರರ್ಥ ತಿಳಿದೇ ಬರೆದುಕೊಂಡಿದ್ದನಾ? ಗೊತ್ತಿಲ್ಲ. ಹಾಗೇ ಬರೆದುಕೊಂಡ ಮೇಲೆ ಅದೆಷ್ಟೋ ಬಾರಿ ಇದನ್ನ ಓದಿಕೊಂಡಿದ್ದೇನೆ. ಓದಿದ ಪ್ರತಿ ಸಾರಿಯೂ ಖುಷಿ ಪಟ್ಟುಕೊಂಡಿದ್ದೇನೆ.
ಈ ಅಪರಾತ್ರಿಯಲ್ಲಿ, ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ. ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ. ಈ ಹೊತ್ತಿಗೆ ಈ ಕವಿತೆಯ ನೆನಪು.
Entry Filed under: ಅರಳೀಕಟ್ಟೆ. .
2 Comments Add your own
Leave a Comment
Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>
Trackback this post | Subscribe to the comments via RSS Feed
1.
ರಂಜಿತ್ | February 14, 2009 at 8:20 am
ಇದು ಬೇಂದ್ರೆಯವರದೇ ಸಾಲು… ನನಗೂ ತುಂಬಾ ಅಚ್ಚುಮೆಚ್ಚಿನ ಸಾಲು..
ಪ್ರೇಮಿಗಳ ದಿನದಂದು ಎಂಥಾ ಒಳ್ಳೇ ಸಾಲು ನೆನಪಿಸಿದಿರಿ..:)
ಥ್ಯಾಂಕ್ಸ್!
2.
ಕೇಶವ | February 14, 2009 at 11:13 pm
ಈ ಕವಿತೆ ಹೀಗೆ ಮುಂದವರೆಯುತ್ತದೆ:
ಬೆವರಹನಿಯಲಿ ಹಲವು, ಕಣ್ಣೀರಿನಲಿ ಕೆಲವು
ನೆತ್ತರದಿ ಬರೆದುದೆ ಲಕ್ಕವಿಲ್ಲ.
ಚಿತ ಚಿತ್ರಾಕ್ಷರದ ಲಕ್ಷ ಪತ್ರಗಳುಂಟು;
ನಕ್ಷತ್ರ ಓದುತಿವೆ ಮರೆತು ಸೊಲ್ಲ.
ಏನಿಹುದೊ ಎಂತಿಹುದೊ ಸಂಸಾರಸಾರ!
ಕಂಡವರು ಯಾದರ ಅಂತಪಾರ?
ಹೃದಯಸಂಪುಟದಲ್ಲಿ ಒಲವ-ಲೆಕ್ಕಣಿಕೆ
ಮಾಡಿ, ಬರೆಯಲೊ, ಹುಡುಗ, ನಿನ್ನ ಲೆಕ್ಕಣಿಕೆ.
(ಈ ಕವಿತೆ ಬೇಂದ್ರೆಯವರ ಉಯ್ಯಾಲೆ ಕವನಸಂಕಲನದಲ್ಲಿ ಮೊದಲು ಪ್ರಕಟ)
- ಕೇಶವ (www.kannada-nudi.blogspot.com)